ಕೋಳಿಗಳನ್ನು ಸ್ವಸ್ಥವಾಗಿಡುವ ಪ್ರಾಕೃತಿಕ ವಿಧಾನಗಳು
Uploaded 3 years ago | Loading
13:40
Reference book
ಕಲುಷಿತವಾದ ಕುಡಿಯುವ ನೀರು, ಕೊಳಕಾದ ಪ್ರದೇಶ, ಅನುಚಿತ ಆಹಾರ ಕೋಳಿಗಳನ್ನು ಅಸ್ವಸ್ಥವಾಗಿಸುತ್ತದೆ.ಪಂಜರಗಳನ್ನು ಪ್ರತಿದಿನ ಸ್ವಚ್ಛಗೊಳಿಸಬೇಕು. ಪ್ರತಿದಿನ ಮಲವನ್ನು ಮತ್ತು ಕೆಳಗೆ ಚೆಲ್ಲಿರುವ ಆಹಾರವನ್ನು ತೆಗೆಯಬೇಕು. ನೀರನ್ನು ಹರಿಶಿನ ಮತ್ತು potassium permanganate ನಿಂದ ಶುದ್ಧೀಕರಿಸಿ. ಕೋಳಿಗಳಿಗೆ ಸಮತೋಲಿತ ಆಹಾರವನ್ನು ಕೊಡಿ. ಅದರ ನಿರೋಧಕ ಶಕ್ತಿಯನ್ನು ವೃದ್ಧಿಸಲು ಆಹಾರದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇರಿಸಿ. ಕಹಿಯಾದ ಔಷಧೀಯ ಎಳೆಗಳು ಕರುಳಿನಲ್ಲಿರುವ ಪರಾವಲಂಬಿಗಳನ್ನ್ನು ದೂರವಿಡುತ್ತದೆ. ಪರಂಗಿಯ ಹಾಲು, ಅಡಿಕೆ ಪುಡಿ, ಮತ್ತು ದಾಳಂಬರಿಯ ತೊಗಟೆಯನ್ನು ಬಳಸಿ ಕೋಳಿಗಳಿಂದ ಹುಳುಗಳನ್ನು ತೆಗೆಯಿರಿ. ಸುಣ್ಣದ ನೀರು ಅಥವಾ ಪುಡಿಮಾಡಿದ ಮೊಟ್ಟೆಯ ಚಿಪ್ಪನ್ನು ಕೊಟ್ಟು calcium ಕೊರತೆಯನ್ನು ತಡೆಗಟ್ಟಿ. ಸುಗಂಧವಿರುವ ಎಲೆಗಳ ಒಂದು ಗೊಂಚಲನ್ನು ಕೋಳಿ ಮನೆಯಲ್ಲಿ ಕಟ್ಟಿ. ಇದರ ಬಲವಾದ ಗಂಧ ಪರಾವಲಂಬಿಗಳನ್ನು ಅಟ್ಟಿಸುತ್ತದೆ.
Current language
Kannada
Produced by
Atul Pagar, ANTHRA